ಸ್ವಪ್ನಫಲ

ಸ್ವಪ್ನಫಲಗಳನ್ನು ಈ ರೀತಿಯಾಗಿ ಜ್ಯೋತಿಷ್ಯಾಸ್ತ್ರದಲ್ಲಿ ತಿಳಿಸಿರುತ್ತಾರೆ.

 

    • ಸ್ವಪ್ನದಲ್ಲಿ ನಮ್ಮ ನೆಚ್ಚಿನ ದೈವ, ಮುತ್ತೈದೆಯರು, ಬಿಳಿ ವಸ್ತುಗಳು, ನದಿಗಳು, ಪುಣ್ಯಕ್ಷೇತ್ರಗಳು, ತುಳಸಿ ಗಿಡ, ಕಂಡರೆ ಶುಭಫಲಗಳುಂಟಾಗುತ್ತವೆ.

    • ಕನಸಿನಲ್ಲಿ ಬೆಂಕಿಯ ಜ್ವಾಲೆಯನ್ನು ಕಂಡರೆ ಭೋಗ ಸಂಪತ್ತು ಲಭಿಸುತ್ತದೆ.

    • ಅನ್ನವನ್ನು ಕಂಡರೆ ಕೈಗೊಂಡ ಕಾರ್ಯ ನೆರವೇರುವುದು.

    • ಸತ್ತವರು ಬದುಕಿಬಂದಂತಾದರೆ ಮರಣಭಯ ಉಂಟಾಗುತ್ತದೆ.

    • ಕನಸಿನಲ್ಲಿ ಹಾವು ಕಂಡರೆ ಅಪಮೃತ್ಯು ಭಯವೆಂದು ಹೇಳುತ್ತಾರೆ. ಆದರೆ ಮನಸ್ಸಿನಲ್ಲಿ ಲೈಂಗಿಕ ಆಸಕ್ತಿಗಳಿದ್ದಾಗ ಹಾವು ಕನಸಿನಲ್ಲಿ ಬೀಳುವುದೆಂದು ಮನೋವಿಜ್ಞಾನಿಗಳು ತಿಳಿಸಿರುತ್ತಾರೆ.

    • ಬಾಳೆಹಣ್ಣು, ಮಾವಿನಹಣ್ಣು ಮುಂತಾದ ಹಣ್ಣನ್ನು ಕಂಡರೆ ಸಂತಾನಪ್ರಾಪ್ತಿಯಾಗುವುದು. ಇಲ್ಲವೆ ಕೈಗೊಂಡ ಕಾರ್ಯಗಳು ನೆರವೇರುವುವು.

    • ಸ್ವಪ್ನದಲ್ಲಿ ಭೋಜನ ಮಾಡಿದಂತೆ ಕಂಡರೆ ರೋಗಭಯ.

    • ಸ್ವಪ್ನದಲ್ಲಿ ಮಲವನ್ನು ಕಂಡರೆ ಧನಪ್ರಾಪ್ತಿ ಎಂದು ತಿಳಿಯಬೇಕು.

    • ಮಳೆ ಬಂದಂತೆ ಕಂಡರೆ ಪ್ರಯಾಣ.

    • ಹಾರಿಕೊಂಡು ಹೋದಂತೆ ಕಂಡರೆ ಸ್ಥಾನ ಪಲ್ಲಟ.


    • ಕೆಂಪು ಇಲ್ಲವೆ ಕಪ್ಪು ಬಣ್ಣದ ವಸ್ತುಗಳನ್ನು ಕಂಡರೆ ಕೇಡು.

    • ಕನಸಿನಲ್ಲಿ ಶೀತ, ನೆಗಡಿಯಾದರೆ ಮನೆಗೆ ನೆಂಟರು ಬರುವರು.

    • ಸಂಗೀತ ಕೇಳಿದರೆ ಸಾಲ ಮಾಡುವ ಪ್ರಸಂಗ ಬಂದೊದಗಬಹುದು.

    • ಜಗಳ ಮಾಡುತ್ತಿರುವುದನ್ನು ಕಂಡರೆ ತೊಂದರೆ.

    • ದೇವರ ಪೂಜೆ ಮಾಡುತ್ತಿದ್ದಂತೆ ಕಂಡರೆ ಮಾಡಿದ್ದ ಸಾಲ ಪರಿಹಾರವಾಗುವುದು.

    • ವಿಧವೆಯರು, ಸನ್ಯಾಸಿ, ಬೆತ್ತಲೆ ಇದ್ದವರನ್ನು ಕಂಡರೆ ದುಃಖಕರ.

    • ಮದ್ಯ, ಹೆಂಡಗಳನ್ನು ಕಂಡರೆ ಶುಭಸೂಚಕ.

    • ಹಲ್ಲು ಬಿದ್ದಂತೆ ಸ್ವಪ್ನವಾದರೆ ವ್ಯಸನ.

    • ಸೂರ್ಯ ಚಂದ್ರರನ್ನು ಕಂಡರೆ ರೋಗನಾಶ.

    • ಹೆಣವನ್ನು ಕಂಡರೆ, ತಾನೇ ಸತ್ತಂತೆ ಕಂಡರೆ ದೀರ್ಘಾಯುಷಿ.


    • ಸತ್ತವರು ಬಂದು ಅಪ್ಪಿದರೆ ಸಾವು

    • ಹೆಣ್ಣು ಕಂಡರೆ ಶುಭಸೂಚಕ

       


ಕನಸುಗಳು ರಾತ್ರಿ 9ಗಂಟೆಯಿಂದ 12ಗಂಟೆಯೊಳಗೆ ಬಿದ್ದರೆ ಒಂದು ತಿಂಗಳೊಳಗಾಗಿ ಫಲವು ಕಂಡುಬರುತ್ತದೆ. ರಾತ್ರಿ 12 ಗಂಟೆಯಿಂದ 3 ಗಂಟೆಯೊಳಗಾಗಿ ಬಿದ್ದ ಸ್ವಪ್ನಕ್ಕೆ ಒಂದು ವಾರದೊಳಗಾಗಿ ಫಲವು ಕಂಡುಬರುವುದು. ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯ ಒಳಗಾಗಿ ಬಿದ್ದ ಸ್ವಪ್ನಕ್ಕೆ ಮೂರು ದಿವಸಗಳೊಳಗಾಗಿ ಫಲವು ಕಂಡುಬರುವುದು. ಸೂರ್ಯೋದಯದ ವೇಳೆಯಲ್ಲಿ ಬಿದ್ದ ಸ್ವಪ್ನವು ಅದೇ ದಿನದಲ್ಲಿ ಫಲವು ಕಂಡುಬರುವುದು.

~~ ಸಂಗ್ರಹ  ~~