ಲವಂಗ
ಶುಕ್ರವಾರದ ಬೆಳಗಿನ ಜಾವ ಸ್ನಾನಾದಿಗಳನ್ನು ಮಾಡಿ ನಂತರ ದೇವರಿಗೆ ದೀಪ ಬೆಳಗಿಸಿ ದೇವರ ಮುಂದೆ ಕುಳಿತು ತನಗೆ ಬಂದಿರುವ ಕಷ್ಟಗಳನ್ನೆಲ್ಲ ಹೇಳಿಕೊಳ್ಳುತ್ತಾ ಒಂದು ಕೆಂಪು ಬಟ್ಟೆಯಲ್ಲಿ ಎರಡು ಏಲಕ್ಕಿ ಮತ್ತು ಎರಡು ಲವಂಗವನ್ನು ಕಟ್ಟಿ ನಮ್ಮ ಪರ್ಸಿನೊಳಗೆ ಇಟ್ಟುಕೊಳ್ಳಿ ಇಲ್ಲವೇ ಗೋಡ್ರೇಜಲ್ಲಿ ಹಣ ಇಡುವ ಕಬಾಟಿನಲ್ಲಿ ಆಗಬಹುದು ಹೀಗೆ ಮಾಡಿದಲ್ಲಿ ನಮ್ಮ ಕಷ್ಟಗಳೆಲ್ಲ ಪರಿಹಾರವಾಗಿ ನಮ್ಮ ಸುಖದ ಜೀವನವನ್ನು ಕಾಣಬಹುದು ಆದುದರಿಂದ ಏನೇ ಕಷ್ಟಗಳು ಬಂದರೂ ಅದನ್ನು ಪರಿಹರಿಸಲು ಸುಲಭವಾದ ಉಪಾಯವನ್ನು ಕಂಡುಕೊಳ್ಳಬೇಕು ಹೀಗೆ ಮಾಡಿದಲ್ಲಿ ನಮಗೆ ಯಾವ ಕಷ್ಟವು ಬರಲಾರದು .
ನೀವು ನಿದ್ದೆ ಮಾಡುವಾಗ ನಿಮ್ಮನ್ನು ಕೆಟ್ಟ ಭಯಾನಕ ಕನಸುಗಳು ಕಾಡುತ್ತಿದ್ದರೆ ರಾತ್ರಿ ಮಲಗುವಾಗ ತಲೆ ದಿಂಬಿನ ಕೆಳಗಡೆ ಎರಡು ಲವಂಗವನ್ನು ಇಟ್ಟುಕೊಂಡು ಮಲಗಬೇಕು. ಲವಂಗವನ್ನು ತಲೆ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗುವುದರಿಂದ ಲವಂಗವೂ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುತ್ತದೆ. ಈ ರೀತಿ ರಾತ್ರಿ ಹೊತ್ತು ಲವಂಗವನ್ನು ಇಟ್ಟುಕೊಂಡು ಮರುದಿನ ಸ್ನಾನ ಮಾಡಿ ಈ ಲವಂಗವನ್ನು ನೀರಿನಲ್ಲಿ ಅಥವಾ ಹೊಂಡದಲ್ಲಿ ಹಾಕಿ.
~~ ಸಂಗ್ರಹ ~~