ಯಾವ ವಾರ ಏನು ಮಾಡಿದರೆ ಕಾರ್ಯ ಯಶಸ್ಸು?

ಇಲ್ಲಿ ತಿಳಿಸುತ್ತಿರುವ ಅಂಶ ಸಾಮಾನ್ಯವಾಗಿ ಅನ್ವಯಿಸುವಂಥದ್ದು. ಆದ್ದರಿಂದ ಯಾರಾದರೂ ಇದನ್ನು ಪ್ರಯತ್ನಿಸಬಹುದು. ಆದರೆ ನಂಬಿಕೆ ಬಹಳ ಮುಖ್ಯ. ಮಾಡುವ ಕೆಲಸದಲ್ಲಿನ ಉದ್ದೇಶ ಶುದ್ಧಿ ಮತ್ತು  ಪ್ರಯತ್ನ ಸಹ ಅಷ್ಟೇ ಮುಖ್ಯ. ಇಲ್ಲಿ ತಿಳಿಸುತ್ತಿರುವ ಸಲಹೆ ಆಯಾ ವಾರಕ್ಕೆ ಅನ್ವಯಿಸುವಂತೆ ಇದೆ.

 ಭಾನುವಾರ
ಭಾನುವಾರದಂದು ಯಾವುದೇ ಶುಭ ಕಾರ್ಯಗಳಿಗೆ ತೆರಳುವ ಮುನ್ನ ಮನೆಯಲ್ಲಿ ವೀಳ್ಯದೆಲೆ- ಅಡಿಕೆ ಹಾಕಿಕೊಳ್ಳಿ. ಜತೆಗೆ ಬೆಳಗ್ಗೆ ಸೂರ್ಯದೇವನಿಗೆ ನೀರನ್ನು ಇಡಿ. ವೀಳ್ಯದೆಲೆ- ಅಡಿಕೆ ಎಲ್ಲ ಸೇರಿ ಮಾಡುವ ಬೀಡಾ ಸೇವಿಸಿದರೂ ಅಡ್ಡಿ ಇಲ್ಲ. ಅಭ್ಯಾಸ ಇಲ್ಲದವರು ದಯವಿಟ್ಟು ಮಾಡಬೇಡಿ. ಒಂದು ವೇಳೆ ವೀಳ್ಯದೆಲೆ- ಅಡಿಕೆ ಹಾಕುವಂತಿದ್ದರೆ ಅಡ್ಡಿ ಇಲ್ಲ.

ಸೋಮವಾರ
ಇನ್ನು ಸೋಮವಾರದಂದು ಮುಖ್ಯ ಕೆಲಸವಿದ್ದು, ಮನೆಯಿಂದ ಆಚೆ ತೆರಳುವ ಮುನ್ನ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬವನ್ನು ಒಮ್ಮೆ ನೋಡಿಕೊಂಡು, ಆ ನಂತರ ಹೊರಡಿ. ಹೀಗೆ ಮಾಡುವುದರಿಂದ ನೀವು ಪ್ರಯತ್ನಿಸುವ ಕೆಲಸದಲ್ಲಿ ಯಶಸ್ಸು ದೊರೆಯುವ ಸಾಧ್ಯತೆಯು ಹೆಚ್ಚಿರುತ್ತದೆ.

ಮಂಗಳವಾರ
ಕುಜ ಅಥವಾ ಅಂಗಾರಕನ ವಾರವಾದ ಮಂಗಳವಾರದಂದು ಬಹು ಮುಖ್ಯ ಕಾರ್ಯದ ಸಲುವಾಗಿ ಪ್ರಯತ್ನಿಸುತ್ತಿದ್ದರೆ, ಅಂದು ನಿಂಬೆಹಣ್ಣನ್ನು ಒಳಗೊಂಡಂಥ ಯಾವುದಾದರೂ ಖಾದ್ಯ ಅಥವಾ ಸ್ವಲ್ಪ ನಿಂಬೆಹಣ್ಣಿನ ಭಾಗ ತಿಂದು, ಆ ನಂತರ ತೆರಳಿದರೆ ಕಾರ್ಯ ಸಿದ್ಧಿಗೆ ಅನುಕೂಲ ಆಗುತ್ತದೆ.

ಬುಧವಾರ
ಕೆಲವರು ಸಾಧಾರಣವಾಗಿ ಈ ಸಲಹೆ ನೀಡುತ್ತಾರೆ. ಆದರೆ ಪರಿಣಾಮಕಾರಿ ಆಗುವುದು ಬುಧವಾರದಂದು. ತುಂಬ ಮುಖ್ಯವಾದ ಕೆಲಸದ ಮೇಲೆ ಬುಧವಾರದಂದು ಮನೆಯಿಂದ ಹೊರಡುವ ಮೊದಲು ಸ್ವಲ್ಪ ಸಿಹಿ ತಿಂದು ಹೊರಡಿ. ಆಗ ಯತ್ನ ಕಾರ್ಯದಲ್ಲಿ ಸಫಲತೆಗೆ ಸಹಕಾರವಾಗುತ್ತದೆ.

ಗುರುವಾರ
ಯಾರಿಗೇ ಆಗಲಿ ತಾವು ಅನುಸರಿಸುವ ಗುರುಗಳ ಆರಾಧನೆಗೆ ಮುಖ್ಯವಾದ ವಾರವಾದ ಗುರುವಾರದಂದು ಯಾವುದಾದರೂ ಬಗೆಯಲ್ಲಿ ಹಳದಿ ಸಾಸಿವೆ ತಿಂದು ಮನೆಯಿಂದ ಹೊರಟರೆ ಮಾಡುವ ಕೆಲಸದಲ್ಲಿ ಅನುಕೂಲ ದೊರೆಯುತ್ತದೆ. ಹಳದಿ ಸಾಸಿವೆ ಸ್ವಲ್ಪ ಪ್ರಮಾಣದಲ್ಲಿ ಬಾಯಿಗೆ ಹಾಕಿಕೊಂಡು ಹೊರಡಿ, ಆ ನಂತರ ಬದಲಾವಣೆ ನೀವು ಗಮನಿಸಿ.

ಶುಕ್ರವಾರ
ಇನ್ನು ಲಕ್ಷ್ಮಿ ಅಥವಾ ದೇವಿ ಆರಾಧನೆಗೆ ಬಹಳ ಅನುಕೂಲಕರ ಎಂದೇ ಪರಿಗಣಿಸುವ ಶುಕ್ರವಾರದಂದು ಮನೆಯಿಂದ ತೆರಳುವ ಮೊದಲು ಮೊಸರನ್ನು ತಿಂದು ಹೊರಟರೆ ನೀವು ಪ್ರಯತ್ನಿಸಿದ ಕಾರ್ಯದಲ್ಲಿ ಸಫಲತೆ ಸಿಗುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಗಳು ಮೊಸರು ಹಾಗೂ ಸಕ್ಕರೆ ತಿಂದು ಮನೆಯಿಂದ ಹೊರಟರೆ ಪರೀಕ್ಷೆಯಂಥ ಸಂದರ್ಭದಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.

ಶನಿವಾರ
ಯಾವುದಾದರೂ ಕಾರ್ಯಕ್ಕೆ ಶನಿವಾರದಂದು ಪ್ರಯತ್ನಿಸುತ್ತಿದ್ದಲ್ಲಿ ಮನೆಯಿಂದ ತೆರಳುವ ಮೊದಲು ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸಿ, ಆ ನಂತರ ನೀವು ಅಂದುಕೊಂಡ ಕೆಲಸ ಕೈಗೊಂಡರೆ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಸಲಹೆಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

 ಸಂಗ್ರಹ ಮಾಹಿತಿ

Buy Now
https://amzn.to/3JIlxdt