ಕರಿಬೇವಿನ ಎಲೆಯ ಉಪಯೋಗ

ಕರಿಬೇವಿನ ಎಲೆಯ ಉಪಯೋಗಗಳು

ಇದರ ಎಲೆಗಳನ್ನು ಅರೆದು ಕಡಲೆ ಕಾಳು ಗಾತ್ರದ ಮಾತ್ರೆಗಳನ್ನಾಗಿ ಸಿದ್ದಪಡಿಸಿಕೊಂಡು food poisoning ಆದ ಸಂದರ್ಭದಲ್ಲಿ 7 ದಿನಗಳ ಕಾಲ ತೆಗೆದುಕೊಳ್ಳಬೇಕು.

ಎಲೆ ಮತ್ತು ಅರಸಿನವನ್ನು ಅರೆದು ಹೊರಲೇಪನವಾಗಿ ಹಾಗೂ ಎಲೆಯ ಕಷಾಯ ಸೇವನೆ ಜೇನು ಮುಂತಾದ ವಿಷಕಾರಿ ಕೀಟಗಳ ಕಡಿತ ಅಲ್ಲದೆ ಚೇಳು ಕಡಿತಕ್ಕೂ ಮದ್ದು.
ಎಲೆಯನ್ನು ಹಾಲಿನಲ್ಲಿ ಬೇಯಿಸಿ ಅರೆದು ಹಚ್ಚಿಕೊಂಡರೆ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ ಒಳ್ಳೆಯ mosquito repellent.ಹಾಗೆಯೇ ಇದು ತುರಿಕೆ (itches ), ತುರಿಕಜ್ಜಿ (scabies), ಮತ್ತು ಹುಳಕಡ್ಡಿಗೆ (ringworm) ಉತ್ತಮ.

ಎಲೆಯ ಕಷಾಯ ಹಸಿವನ್ನು ಪ್ರೆರೇಪಿಸುತ್ತದೆ (induce appetite ).

ಎಲೆಯನ್ನು ದಿನಾ ಜಗಿಯುವುದು ಕೊಲೆಸ್ಟರಾಲ್, ಮದುಮೇಹ ಮತ್ತು ಗ್ಯಾಸ್ಟ್ರಿಕ್ ತೊಂದರೆಗಳಿಗೆ ಪರಿಣಾಮಕಾರಿ.

ಎಲೆಯನ್ನು ಅರೆದು ನೆತ್ತಿಯ ಮೇಲೆ ಲೇಪಿಸುವುದು ತಲೆಸುತ್ತುವಿಕೆಗೆ( vertigo ) ಆರೈಕೆ.

ತಾಜಾ ಎಲೆಯ ಸೇವನೆ ರಕ್ತ ಭೇಧಿ (blood dysentery ) ತಹಬದಿಗೆ ಬರಲು ಸಹಾಯಕ.

ಟೈಫಾಯಿಡ್ ಬಂದಾಗ ಆಗುವ ವಾಂತಿಗೆ ಬೇರು ಮತ್ತು ತೊಗಟೆಯ ಕಷಾಯ ಪರಿಹಾರಕ.

ಎಳೆ ಚಿಗುರಿನ ಪೇಸ್ಟ್ ಗಾಯ ಮತ್ತು ವೃಣಗಳಿಗೆ ಗುಣಕಾರಿ.

ಎಲೆಯ ರಸ ಹಾಕಿ ಕಾಯಿಸಿದ ಎಣ್ಣೆ ಕೂದಲು ಕಪ್ಪಾಗಲು ಸಹಕಾರಿ ಎಂಬ ಅರಿವಿದೆ.

ಭೇಧಿ ನಿಲ್ಲಲು ಎಲೆಯನ್ನು ಜಜ್ಜಿ ಬೇಯಿಸಿ ಮಜ್ಜಿಗೆಯೊಡನೆ ಉಪ್ಪು ಸೇರಿಸಿ ಕೊಡುವುದು.

ಎಲೆಯ ಪೇಸ್ಟ್ ಚರ್ಮ ರೋಗಗಳಿಗೆ ರಸ ಹೊಟ್ಟೆನೋವಿಗೆ ಉತ್ತಮ.

ಎಲೆಯ ರಸ ಅಥವಾ ಸಾರ ಮೂತ್ರವರ್ಧಕ ಇದು ಆಹಾರದಲ್ಲಿನ ವಿಷಕಾರಕಗಳನ್ನು (toxins ) ನಿವಾರಿಸುತ್ತದೆ ಮೂತ್ರ ರೋಗಗಳಿಗೆ ಪರಿಣಾಮಕಾರಿ.

1:1:1ಅನುಪಾತದಲ್ಲಿ ಕರಿಬೇವು ರಸ, ಗರುಗದ ಎಲೆಯ ರಸ (Eclipta prostrata ), ಮತ್ತು ತೆಂಗಿನ ಎಣ್ಣೆ ಸೇರಿಸಿ ಕಾಯಿಸಿದರೆ ಅತ್ಯುತ್ತಮ ಕೇಶ ತೈಲ.

ಎಲೆಯ ರಸ ಸಾರ ಜೀರ್ಣಕಾರಿ, ಹಸಿವು ಉದ್ದೀಪಕ ಮತ್ತು ಮಕ್ಕಳ ಅಪೌಷ್ಟಿಕತೆಗೆ ಪ್ರಯೋಜನಕಾರಿ.

ಕರಿಬೇವಿನ ತಂಬುಳಿ ಮಾಡಿ ಉಣ್ಣುವುದು ಜೀರ್ಣಕಾರಿ,ವಿಷನಿವಾರಕ,ರಕ್ತಶುದ್ಧಕ್ಕೆ , ಮೂಳೆಗೆ ಬಲ ಬರುವುದಕ್ಕೆ ಮತ್ತು ಚರ್ಮ ರೋಗ ಮೂತ್ರ ರೋಗಗಳಿಗೆ ಅತ್ಯುತ್ತಮ.

ಮೂತ್ರದಲ್ಲಿ ರಕ್ತ ಹೋಗುತಿದ್ದರೆ., ಉರಿ ಮೂತ್ರಕ್ಕೆ., ಮತ್ತು ಮೂತ್ರಕಟ್ಟುವಿಕೆಗೆ (urine block )ಎಲೆಯ ರಸವನ್ನು ನೀರಿನೊಂದಿಗೆ ಬರಿ ಹೊಟ್ಟೆಯಲ್ಲಿ 3 ದಿನ ಕುಡಿಯುವುದು.

ಕರಿಬೇವಿನ ಎಲೆ, ಎಳ್ಳು ಮತ್ತು ಜೀರಿಗೆಯನ್ನು ಅರೆದು ಮಜ್ಜಿಗೆಯೊಡನೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ24 ದಿನ ಸೇವಿಸುವುದು ಒಳ್ಳೆಯ ಟಾನಿಕ್.

ಸಮೂಲ ಗಿಡದ ಕಷಾಯ ಉತ್ತಮ ವಿರೇಚಕ (laxative ), ವಿಷಹರ. ಜ್ವರ, ಚರ್ಮ ರೋಗ ಮತ್ತು ಕಾಮಲೆಗೆ ಉತ್ತಮ.

ಕರಿಬೇವನ್ನು ಬೆಳೆಸಿದ ಅನುಭವಗಳನ್ನು ಕೇಳಿ ನೋಡಿ.ನಮ್ಮ ಮನೆಯಲ್ಲಿ ಸೊಗಸಾಗಿ ಬಂದಿದೆ ಎಂದು ಕೆಲವು ಜನ ಹೇಳಿದರೆ ಅಯ್ಯೋ ನಮ್ಮ ಮನೆಯ ಹಿತ್ತಲಲ್ಲಿ ಕರಿಬೇವು ಬೆಳೆಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಏನೇ ಮಾಡಿದರೂ ಬೆಳೆಯುವುದಿಲ್ಲ ಎನ್ನುವ ಮಂದಿಯೂ ಅಷ್ಟೇ ಇದ್ದಾರೆ. ಇನ್ನೂ ಮುಂದುವರಿದು ಹೇಳುತ್ತಾರೆ ಎಂತೆಂತ ಗಿಡ ಬೆಳೆಸಿದ್ದೇವೆ ಆದರೆ ಈ ಕರಿಬೇವು ಮಾತ್ರ ನಮ್ಮ ಜಾಗದಲ್ಲಿ ಬೆಳೆಯುವುದಿಲ್ಲ ನಮ್ಮ ಅಜ್ಜನ ಕಾಲದಿಂದಲೂ ಪ್ರಯತ್ನ ಪಡುತಿದ್ದೇವೆ ಇತ್ಯಾದಿ ಇತ್ಯಾದಿ. ಇದಕ್ಕೆಲ್ಲಾ ಕಾರಣ ಮಣ್ಣಿನಲ್ಲಿ ಮ್ಯಾಂಗನೀಸ್ ಅಂಶದ ಕೊರತೆ. ಕರಿಬೇವು ಬೆಳೆಯಲು ಮ್ಯಾಂಗನೀಸ್ ಖನಿಜವನ್ನು ಬಯಸುತ್ತದೆ. ಇದರ ಅರಿವು ನಮ್ಮ ಹಿರಿಯರಿಗೆ ಇತ್ತು ಅದಕ್ಕಾಗಿಯೇ ಕರಿಬೇವಿನ ಗಿಡಕ್ಕೆ ಕೆಂಪು ಮಣ್ಣು ಹಾಕಿ ಹುಳಿ ಮಜ್ಜಿಗೆ, ಹುಳಿ ಸಾರು, ಸಾಂಬಾರುಹಾಕುತಿದ್ದರು. ಕೆಂಪು ಮಣ್ಣಿನಲ್ಲಿ ಮ್ಯಾಂಗನೀಸ್ ಅಂಶ ಇರುತ್ತದೆ ಹುಳಿ ಮಣ್ಣಿನಲ್ಲಿ ಸಸ್ಯಗಳಿಗೆ ದೊರಕುವ ಮ್ಯಾಂಗನೀಸ್ ಅನ್ನು ಹೆಚ್ಚಿಸಬಹುದು.

ಕರಿಬೇವನ್ನು ಆಯುರ್ವೇದ ಔಷಧಿಗಳಾದ Kalasakadi kashaya, Pamantaka taila, Jatyadi taila ಮತ್ತು Jatyadi ghrta ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ

~~ಸಂಗ್ರಹ~~