ಕಾಲ್ಗೆಜ್ಜೆ
ಸ್ತ್ರೀ ಕಾಲ್ಗೆಜ್ಜೆ ನಮ್ಮ ಸಂಪ್ರದಾಯ, ಇದರ ಹಿಂದಿರುವ ವೈಜ್ಞಾನಿಕ ಕಾರಣ ತಿಳಿದರೆ ಕಾಲ್ಗೆಜ್ಜೆ ಧರಿಸುವುದರಿಂದ ನಿಮಗೆ ತುಂಬಾ ಪ್ರಯೋಜನ ಗಳಿವೆ
1. ಆಗಾಗ ಕಾಲುನೋವು, ಪಾದಗಳು ಒಂದು ರೀತಿ ಮರಗಟ್ಟಿದಂತೆ ಅನಿಸುವುದು ಇವೆಲ್ಲಾ ಸಮಸ್ಯೆಗೆ ಪರಿಹಾರ ನೀವು ಕಾಲ್ಗೆಜ್ಜೆ ಬಳಸುವುದರಿಂದ ಕಂಡು ಕೊಳ್ಳಬಹುದು.
2. ಕಾಲಿನ ಹಿಮ್ಮಡಿಯಲ್ಲಿ ತುಂಬಾ ನೋವು ಕಂಡು ಬರುತ್ತಿದ್ದರೆ ಬೆಳ್ಳಿಯ ಕಾಲ್ಗೆಜ್ಜೆ ಬಳಸಿ, ಬೆಳ್ಳಿ ಈ ರೀತಿಯ ನೋವು ಕಡಿಮೆ ಮಾಡುವುದು ಹಾಗೂ ದೇಹಕ್ಕೆ ಧನಾತ್ಮಕ ಶಕ್ತಿ ಹರಿಸುತ್ತದೆ.
3. ಬೆಳ್ಳಿಯ ಕಾಲ್ಗೆಜ್ಜೆ ಸಿಯಾಟಿಕ್ ನೋವು ಕಡಿಮೆ ಮಾಡುತ್ತದೆ. ಆ ನೋವು ನಮ್ಮ ಹಿಂಬದಿಯಿಂದ ಹರಿದು ಪಾದಗಳವರೆಗೆ ಬರುವುದು. ಕಾಲ್ಗೆಜ್ಜೆ ಧರಿಸುವುದರಿಂದಾ ನೋವು ಕಡಿಮೆಯಾಗುವುದು, ಕಾಲಿನ ಮಣಿಗಂಟಿನಲ್ಲಿ ಇರುವ ಊತ ಕಡಿಮೆಯಾಗುವುದು. ಅಲ್ಲದೆ ಪಾದಗಳಲ್ಲಿ ರಕ್ತ ಸಂಚಾರ ಹೆಚ್ಚುವುದು.
4. ಕಾಲಿಗೆ ಕಾಲ್ಗೆಜ್ಜೆ ಧರಿಸುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಹರಿಸುವುದು. ಇದು ನಿಮ್ಮ ದೇಹದಲ್ಲಿ ಶಕ್ತಿಯನ್ನು ತುಂಬುವುದು. ಬೆಳ್ಳಿಯಲ್ಲಿರುವ ಧನಾತ್ಮಕ ಅಯಾನುಗಳು ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಹರಿಸುವುದ ರಿಂದ ದೇಹದಲ್ಲಿ ಒಂದು ಉಲ್ಲಾಸ, ಉತ್ಸಾಹ ತುಂಬುವುದು.
5. ಕಾಲುಗಳಲ್ಲಿ ಊತ ಇದ್ದರೆ ಅದು ನಮ್ಮ ದಿನನಿತ್ಯದ ಚಟುವಟಿಕೆಗೆ ತೊಂದರೆ ಉಂಟು ಮಾಡುವುದು, ಇದರಿಂದ ಪಾದಗಳಲ್ಲಿ ನೋವು ಕಂಡು ಬರುವುದು, ಕಾಲ್ಗಜೆ ಧರಿಸಿದರೆ ನೋವು ಕಡಿಮೆಯಾಗುವುದು, ಊತವೂ ಇರುವುದಿಲ್ಲ.
6. ಕಾಲ್ಗಜೆ ನಿಮ್ಮ ಕಾಲಿನ ಸೌಂದರ್ಯ ಹೆಚ್ಚಿಸುವುದು; ಮಾತ್ರವಲ್ಲ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದುಗ್ಧರಸ ಗ್ರಂಥಿಗಳು ಚಟುವಟಿಕೆ ಯಿಂದ ಇರುವಂತೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ಅಲ್ಲದೆ ಬೆಳ್ಳಿ ಕಾಲ್ಗೆಜ್ಜೆ ಬ್ಯಾಕ್ಟಿರಿಯಾಗಳ ವಿರುದ್ಧವೂ ಹೋರಾಡುತ್ತೆ.
7. ಬೆಳ್ಳಿಯ ಕಾಲ್ಗೆಜ್ಜೆ ಬೆಳ್ಳಿಯ ಅಯಾನ್ಗಳನ್ನು ಉತ್ಪತ್ತಿ ಮಾಡುತ್ತವೆ, ಇದು ದೇಹವು ಬ್ಯಾಕ್ಟಿರಿಯಾಗಳ ವಿರುದ್ದ ಹೋರಾಡವ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಹಿಂದೆಯೆಲ್ಲಾ ಸಮುದ್ರಯಾನ ಮಾಡುವವರು ಬೆಳ್ಳಿ ಹಾಗೂ ರಮ್ (ಅಲ್ಕೋಹಾಲ್ಕ್) ತೆಗೆದುಕೊಂಡು ಹೋಗುತ್ತಿದ್ದರು. ನೀರಿಗೆ ಇವೆರಡು ಹಾಕಿದರೆ ಆ ಶುದ್ಧ ನೀರು ಸಿಗುತ್ತಿತ್ತು.
8. ಬೆಳ್ಳಿಯ ಕಾಲ್ಗೆಜ್ಜೆ ದೇಹದಲ್ಲಿ ಹಾರ್ಮೋನ್ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಅನಿಯಮಿತ ಮುಟ್ಟಿನ ಸಮಸ್ಯೆ, ಒಬೆಸಿಟಿ ಮುಂತಾದ ತೊಂದರೆಗಳನ್ನು ತಡೆ ಗಟ್ಟುತ್ತೆ. ಗರ್ಭಿಣಿಯರು, ಬಾಣಂತಿಯರು ಬೆಳ್ಳಿಯ ಕಾಲ್ಗೆಜ್ಜೆ ಧರಿಸಿದರೆ ಒಳ್ಳೆಯದು.
ಈ ಒಂದು ಬೆಳ್ಳಿಯ ಸಾಧನ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತೆ. ಅಲ್ಲದೆ ಕೋಪವನ್ನೂ ಕಡಿಮೆ ಮಾಡುವುದು.
ಸ್ತ್ರೀಯರು ಬೆಳ್ಳಿ ಕಾಲ್ಗಜ್ಜೆ ಧರಿಸಿ ಓಡಾಡುತ್ತಿದ್ದರೆ ಲಕ್ಷ್ಮಿಯು ಆಕರ್ಷಿತಳಾಗುತ್ತಾಳೆ, ಇದರಿಂದ ಮನೆಗೆ ಒಳ್ಳೆಯದು ಎಂದು ಹೇಳಲಾಗುವುದು.
ಕಾಲಿಗೆ ಕಾಲ್ಗೆಜ್ಜೆ ಧರಿಸುವುದು ಮುತ್ತೈದೆಯ ಲಕ್ಷಣ ಎಂದು ಕೂಡ ಹೇಳಲಾಗುವುದು. ಮುತ್ತೈದೆಯ ಆಭರಣ ಗಳಲ್ಲಿ ಇದೂ ಕೂಡ ಒಂದು.
ಬಂಜೆತನ, ಮುಟ್ಟಿನ ಸಮಸ್ಯೆ, ಹಾರ್ಮೋನ್ ಸಮಸ್ಯೆ ಇವೆಲ್ಲಾ ತಡೆಗಟ್ಟಲು ಸಹಕಾರಿ.
9. ಹಿಂದೂ ಸಂಪ್ರದಾಯ ಹಾಗೂ ನಂಬಿಕೆ ಪ್ರಕಾರ ಚಿನ್ನವನ್ನು ಸೊಂಟದ ಮೇಲೆ ಧರಿಸಬೇಕು, ಸೊಂಟದ ಕೆಳಗಡೆ ಧರಸಿಬಾರದು ಎಂದು ಹೇಳುತ್ತಾರೆ. ಚಿನ್ನದ ಕಾಲ್ಗೆಜ್ಜೆ ಅಥವಾ ಕಾಲುಂಗುರ ಧರಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಚಿನ್ನ ಲಕ್ಷ್ಮಿ, ಆದ್ದರಿಂದ ಆದನ್ನು ಕಾಲಿಗೆ ಧರಿಸಬಾರದು ಎನ್ನುತ್ತಾರೆ.
ವೈಜ್ಞಾನಿಕವಾಗಿ ನೋಡುವುದಾದರೆ ಚಿನ್ನ ಕಾಲಿಗೆ ದೇಹದ ಉಷ್ಣತೆ ಹೆಚ್ಚುವುದು, ಅದೇ ಬೆಳ್ಳಿ ದೇಹವನ್ನು ತಂಪಾಗಿ ಇಡುವುದು.
~~ ಸಂಗ್ರಹ ~~