ವೀಳ್ಯದಎಲೆ ಮತ್ತು ನಿಮ್ಮ ಆರೋಗ್ಯ

ಮೊದಲು ಎಲೆ ಅಡಿಕೆ ಮತ್ತು ಸುಣ್ಣದ ಜೊತೆ ಮಾತ್ರವೇ ಸೇವಿಸುತ್ತಿದ್ರು. ಆದ್ರೆ ಬರೀ ವೀಳ್ಯದೆಲೆ ಸೇವಿಸೋದ್ರಿಂದ ಸಹ ಅನೇಕ ಆರೋಗ್ಯಕರ ಪ್ರಯೋಜನಗಳಿವೆ, ಹೃದ್ರೋಗ ಸಮಸ್ಯೆಗಳಿಗೆ ರಾಮಬಾಣವಾಗಿದೆ.

1. ಒಂದು ವೇಳೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ವೀಳ್ಯದೆಲೆಗಳನ್ನು ಸೇವಿಸಿ. ಇದೊಂದು ನೈಸರ್ಗಿಕ ಮೂತ್ರವರ್ಧಕವಾಗಿದೆ.

2. ಸಮಪ್ರಮಾಣದಲ್ಲಿ ನೀರು ಬೆರೆಸಿದ ಒಂದು ಲೋಟ ಹಾಲಿಗೆ ಒಂದು ವೀಳ್ಯದೆಲೆ ಎಂಬ ಪ್ರಮಾಣದಲ್ಲಿ ಎಲೆಯನ್ನು ಅಗಿದು ನೀರುಹಾಲನ್ನು ಕುಡಿದರೆ ದೇಹದ ನಿರ್ಜಲೀಕರಣದ ತೊಂದರೆ ಇಲ್ಲವಾಗುತ್ತದೆ.

3.ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಗಳನ್ನು ದೇಹದಿಂದ ನಿವಾರಿಸುವ ಮೂಲಕ ಹಲವು ಬಗೆಯ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

4.ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ತುಂಬಾ ಉತ್ತಮ. ಇದರ ಸೇವನೆಯಿಂದ ಒಸಡುಗಳಲ್ಲಿ ಒಸರುತ್ತಿರುವ ರಕ್ತ ತಕ್ಷಣವೇ ನಿಲ್ಲುತ್ತದೆ. ಒಂದು ವೇಳೆ ಹಲವು ಕಡೆಗಳಿಂದ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ವೀಳ್ಯದೆಲೆಗಳನ್ನು ನೀರಿನಲ್ಲಿ ಬೇಯಿಸಿ, ತಣಿಸಿ ಅರೆದು ಲೇಪಿಸಿ

5. ವೀಳ್ಯದೆಲೆಯಲ್ಲಿರುವ ಮೂತ್ರವರ್ಧಕ ಗುಣ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುವ ಮೂಲಕ ಅತ್ಯುತ್ತಮ ಮನೆ ಮದ್ದಾಗಿದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ

6.ವೀಳ್ಯದೆಲೆಯನ್ನು ಅರೆದು ಹಣೆಯ ಮೇಲೆ ಮತ್ತು ಪಕ್ಕದ ಭಾಗದಲ್ಲಿ ಹಚ್ಚಿಕೊಂಡಾಗ ಇದರ ತಂಪುಗೊಳಿಸುವ ಗುಣ ತಲೆನೋವನ್ನು ತಕ್ಷಣವೇ ಕಡಿಮೆಯಾಗಿಸುತ್ತದೆ. ಹೊಟ್ಟೆ ಉಬ್ಬರಕ್ಕೆ ಒಂದು ವೀಳ್ಯದೆಲೆ ತಿನ್ನಿ

7. ಒಂದು ವೇಳೆ ನರಗಳ ಸೆಳೆತ ಹಾಗೂ ನರಗಳು ದುರ್ಬಲವಾಗಿದ್ದರೆ ಹಾಗೂ ಸಂವೇದನೆ ಕಡಿಮೆಯಾಗಿದ್ದರೆ ವೀಳ್ಯದೆಲೆಯನ್ನು ಅರೆದು ಹಿಂಡಿ ಸಂಗ್ರಹಿಸಿದ ರಸ ಮತ್ತು ಸಮಪ್ರಮಾಣದ ಜೇನನ್ನು ಬೆರೆಸಿ ಕುಡಿಯುವ ಮೂಲಕ ಈ ದೌರ್ಬಲ್ಯವನ್ನು ಇಲ್ಲವಾಗಿಸುವ ಮೂಲಕ ಇದೊಂದು ಅತ್ಯುತ್ತಮ ಟಾನಿಕ್ ಆಗಿದೆ.

~~ಸಂಗ್ರಹ ~~

---

~~ಸಂಗ್ರಹ ~~