https://uno.uiguru.in/astro/wp-content/uploads/2022/07/conch.jpg

ಶಂಖವನ್ನು ಮನೆಯಲ್ಲಿಟ್ಟರೆ ಏನಾಗುತ್ತೆ..?

ಶಂಖದಿಂದ ಹೊರಹೊಮ್ಮುವ ಶಬ್ಧದ ಪ್ರಯೋಜನವೇನು..?
ನೀರಿನೊಂದಿಗೆ ಶಂಖದಲ್ಲಿದ್ದ ಸಾತ್ವಿಕ ಶಕ್ತಿಯು ಶಂಖವನ್ನು ಊದಿದಾಗ ಅದರ ಶಬ್ಧದಿಂದ ಹೊರಹೊಮ್ಮುತ್ತದೆ. ಯಾವ ಮನೆಯಲ್ಲಿ ಶಂಖವನ್ನು ಊದಲಾಗುತ್ತದೆಯೋ ಆ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲವೆನ್ನುವ ನಂಬಿಕೆಯಿದೆ. ಶಂಖವನ್ನು ಊದುವುದರಿಂದ ಉಸಿರಾಟದ ಸಮಸ್ಯೆಗಳು ದೂರಾಗುತ್ತದೆ. ಶಂಖವನ್ನು ಊದುವುದರಿಂದ ಶ್ವಾಸಕೋಶಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ.

ಶಂಖದಿಂದಾಗುವ ವಾಸ್ತು ಪ್ರಯೋಜನವೇನು..?
ವಾಸ್ತುಶಾಸ್ತ್ರ ಮತ್ತು ಫೆಂಗ್‌ಶೂಯಿ ಕೂಡ ಮನೆಯಲ್ಲಿ ಶಂಖ ಇಡುವುದರಿಂದಾಗುವ ಪ್ರಯೋಜನವನ್ನು ವಿವರಿಸುತ್ತದೆ. ಶಂಖವನ್ನು ಮನೆಯಲ್ಲಿ ಮತ್ತು ಉದ್ಯೋಗದ ಸ್ಥಳದಲ್ಲಿ ಇಡುವುದರಿಂದ ಎಲ್ಲಾ ಕಾರ್ಯದಲ್ಲಿ, ಜೀವನದಲ್ಲಿ, ಆರ್ಥಿಕತೆಯಲ್ಲಿ ಅಭಿವೃದ್ಧಿಯನ್ನು ಹೊಂದಬಹುದು. ಒಂದು ವೇಳೆ ನೀವು ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಇಚ್ಛಿಸಿದರೆ ಮನೆಯ ದಕ್ಷಿಣ ದಿಕ್ಕಿನತ್ತ ಶಂಖ ಚಿಪ್ಪನ್ನು ಇಡಿ. ಶಂಖವನ್ನು ಮನೆಯಲ್ಲಿರಿಸುವುದರಿಂದ ಆರ್ಥಿಕ ಲಾಭವಾಗುತ್ತದೆಯೆಂದು ಮನಬಂದತೆ ಶಂಖವನ್ನು ಇಡಬಾರದು. ಮನೆಯಲ್ಲಿ ಶಂಖವನ್ನು ಕೇವಲ ಪೂಜಾ ಸ್ಥಳದಲ್ಲಿ ಅಥವಾ ಮುಖ್ಯ ಜಗುಲಿಯಲ್ಲಿ ಇಡಬೇಕು. ಮಕ್ಕಳ ವಿದ್ಯಾಭ್ಯಾಸ ಅಥವಾ ಶೈಕ್ಷಣಿಕ ಯಶಸ್ಸಿಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಶಂಖವನ್ನು ಇಡಬೇಕು.

ಶಂಖ ಮತ್ತು ವಿಜ್ಞಾನ:
ವಿಜ್ಞಾನವು ಹೇಳುವ ಪ್ರಕಾರ, ಶಂಖದಲ್ಲಿ ನೀರನ್ನು ಎಷ್ಟೇ ದಿನಗಳವರೆಗೆ ಶೇಖರಿಸಿಟ್ಟರು ಅದು ಹಾಳಾಗುವುದಿಲ್ಲ ಮತ್ತು ಅಶುದ್ಧವಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಶಂಖದಲ್ಲಿ ಶೇಖರಣೆಗೊಂಡ ನೀರನ್ನು ಅಂದರೆ ಶಂಖದಲ್ಲಿಟ್ಟ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಬ್ಯಾಕ್ಟೇರಿಯಾ ಸೇರಿದಂತೆ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತದೆ. ಶಂಖದಲ್ಲಿನ ಗಂಧಕ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶವು ನೀರಿನೊಂದಿಗೆ ಸೇರಿಕೊಳ್ಳುತ್ತದೆ. ಆದ್ದರಿಂದ ಶಂಖದ ನೀರನ್ನು

ಸಿಂಪಡಿಸುವುದರಿಂದ ಮತ್ತು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶಂಖದ ನೀರನ್ನು ಎಂದಿಗೂ ಎಸೆಯಬೇಡಿ. ಒಂದು ವೇಳೆ ನೀವು ಶಂಖದಲ್ಲಿ ನೀರನ್ನು ಶೇಖರಿಸಿದ್ದರೆ ಅದನ್ನು ಮನೆಗೆ ಸಿಂಪಡಿಸಿ, ಮನೆಯ ಸದಸ್ಯರಿಗೆ ಸಂಪಡಿಸಿ. ಇಲ್ಲವೇ, ನಿಮ್ಮ ಮನೆಯಲ್ಲಿ ಶಂಖವಿದ್ದು ಅದನ್ನು ಖಾಲಿಯಿಟ್ಟಿದ್ದರೆ ಆ ಶಂಖಕ್ಕೆ ಇಂದಿನಿಂದಲೇ ನೀರನ್ನು ಹಾಕಿಡುವ ರೂಢಿ ಬೆಳೆಸಿಕೊಳ್ಳಿ.