ರಾಗಿ ಅಂಬಲಿ
ರಾಗಿ ಅಂಬಲಿ ಬೇಕಾಗುವ ಪದಾರ್ಥಗಳು:
( ಅಳತೆ ಕಪ್ = 240 ಎಂಎಲ್ )
~ 4 ಚಮಚ ರಾಗಿ ಹಿಟ್ಟು
~ 2 ಕಪ್ ನೀರು
~ 1 ಕಪ್ ಮಜ್ಜಿಗೆ
~ ಒಂದು ಚಿಟಿಕೆ ಇಂಗು
~ ರುಚಿಗೆ ತಕ್ಕಷ್ಟು ಉಪ್ಪು
~ ಸಣ್ಣಗೆ ಹೆಚ್ಚಿದ್ದ ಅರ್ಧ ಈರುಳ್ಳಿ
~ ಸಣ್ಣಗೆ ಹೆಚ್ಚಿದ್ದ 4 – 5 ಕರಿಬೇವಿನ ಎಲೆ
~ ಸ್ವಲ್ಪ ಕೊತ್ತಂಬರಿ ಸೊಪ್ಪು ( ಬೇಕಾದರೆ)
ರಾಗಿ ಅಂಬಲಿ ಮಾಡುವ ವಿಧಾನ:
~ ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ತೆಗೆದುಕೊಂಡು ಅದಕ್ಕೆ ಸೋಲ್ಪ ನೀರು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ.
~ ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಕುದಿಯಲು ಇಡೀ.
~ ಕುದಿಯುವ ನೀರಲ್ಲಿ ಕಲಸಿದ ರಾಗಿ ಹಿಟ್ಟು ಹಾಕಿ ಮಗುಚುತ್ತಾ ಇರಿ .
~ 4-5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ.
~ ಬಿಸಿ ಆರಿದ ಮೇಲೆ ಉಪ್ಪು, ಮಜ್ಜಿಗೆ ಮತ್ತು ಇಂಗು ಹಾಕಿ ಚನ್ನಾಗಿ ಕಲಸಿ.
~ ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಹಾಕಿ
~ ರಾಗಿ ಅಂಬಲಿ ಕುಡಿದು ಆನಂದಿಸಿ.
ರಾಗಿ ಅಂಬಲಿ ಕುಡಿಯುವುದರಿಂದಾಗುವ ಪ್ರಯೋಜನಗಳು :
ರಾಗಿ ಅಂಬಲಿಯು ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ.
ಇಡೀ ದಿನ ನವ ಉತ್ಸಾಹದ ಜತೆ ಕೆಲಸ ಮಾಡಲು ಇದು ನೆರವಾಗುತ್ತದೆ. ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ರಾಗಿ ಅಂಬಲಿ ಉತ್ತಮ ಆಯ್ಕೆಯಾಗಿದೆ. ದೈಹಿಕವಾಗಿ ಶ್ರಮವಹಿಸಿ ಕೆಲಸ ಮಾಡುವವರಿಗೆ ರಾಗಿ ಅಂಬಲಿ ಹೆಚ್ಚು ಶಕ್ತಿಯನ್ನು ನೀಡುತ್ತದೆ.
~ ರಾಗಿ ಅಂಬಲಿ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ಸಹಾಯಕವಾಗಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಕಲಿಕೆಯಲ್ಲಿಯೂ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಾರೆ.
~ ದೇಹದಲ್ಲಿನ ಹೆಚ್ಚುವರಿ ಉಷ್ಣಾಂಶವನ್ನು ರಾಗಿ ಅಂಬಲಿ ಕಡಿಮೆ ಮಾಡುತ್ತದೆ.
~ ಒಂದು ಗ್ಲಾಸ್ ರಾಗಿ ಅಂಬಲಿಯನ್ನು ಕುಡಿಯುವುದರಿಂದ ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಿನಿಂದ ದೂರವಿರಿಸುತ್ತದೆ.
~ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಸಹಾಯಕವಾಗಿದೆ. ಬೊಜ್ಜಿನ ಸಮಸ್ಯೆಯಿಂದ ದೂರವಿರಲು ಮತ್ತು ವೇಗವಾಗಿ ತೂಕವನ್ನು ಇಳಿಸಲು ಸಹಾಯವಾಗಿದೆ.
~ ರಾಗಿ ಅಂಬಲಿ ಸೇವಿಸುವುದರಿಂದ ಬಿಪಿ ಮತ್ತು ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ.
~ ನಿಯಮಿತವಾಗಿ ರಾಗಿ ಅಂಬಲಿಯನ್ನು ಕುಡಿಯುತ್ತಿದ್ದರೆ, ಪುರುಷರಲ್ಲಿ ವೀರ್ಯ ಹೆಚ್ಚಾಗುತ್ತದೆ.
~ ಪ್ರತಿದಿನ ಬೆಳಿಗ್ಗೆ ಸಾಮಾನ್ಯ ಉಪಹಾರದ ಬದಲು ರಾಗಿ ಅಂಬಲಿ ಕುಡಿಯುವುದರಿಂದ ದಿನವಿಡೀ ನಿಮ್ಮನ್ನು ಸಕ್ರಿಯವಾಗಿರಿಸಿಕೊಳ್ಳಬಹುದು ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.
ರಾಗಿಯ ದುಷ್ಪರಿಣಾಮಗಳು –
~ ರಾಗಿಯನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಆಕ್ಸಲಿಕ್ ಆಮ್ಲದ ತ್ವರಿತ ಚಲನೆ ಉಂಟಾಗುತ್ತದೆ, ಈ ಕಾರಣದಿಂದಾಗಿ ಕಿಡ್ನಿ ಸ್ಟೋನ್ ಹೊಂದಿರುವ ರೋಗಿಗಳಿಗೆ ಆಮ್ಲ ಹಾನಿಕಾರಕವಾಗಿದೆ.
~ ಚಿಕ್ಕ ಮಕ್ಕಳು ರಾಗಿಯನ್ನು ಹೆಚ್ಚು ಸೇವಿಸಬಾರದು.
~ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಸಹ ರಾಗಿಯನ್ನು ಸೇವಿಸಬಾರದು.
~ 1 ದಿನದಲ್ಲಿ ಹೆಚ್ಚು ರಾಗಿ ಸೇವಿಸುವುದರಿಂದ ದೇಹದಲ್ಲಿ ಶೀತ ಉಂಟಾಗುತ್ತದೆ.
~ಸಂಗ್ರಹ ~