ಪ್ರದಕ್ಷಿಣೆ

ಪ್ರದಕ್ಷಿಣೆ ..  ನಾವು ಮಾಡಿದ ಹಿಂದಿನ ಪಾಪ ಕರ್ಮ ನಾಶ ಮಾಡಿ ಮುಂದೆ ಸರಿ ಯಾಗಿ ನಡೆಸು ಅಂತ ಭಗವಂತನಲ್ಲಿ ಬೇಡುವುದು .

ಭಗವಂತ , ಪರಮಾತ್ಮ ನನ್ನ ಕೇಂದ್ರೀ ಕರಿಸಿ ಅವನಿಗೆ ಪ್ರದಕ್ಷಿಣೆ ಬರುವುದು ಕ್ರಮ.ಯಾವಾಗಲು ಸವ್ಯ(ಗಡಿಯಾರದ ರೀತಿ) ಪ್ರದಕ್ಷಿಣೆ .ಅಪಸವ್ಯ ಕ್ರಮ ನಿಷೇಧ .

ಪ್ರದಕ್ಷಿಣೆ ಹೇಗೆ ಇರಬೇಕು ಎಂದರೆ ಪೂರ್ತಿ ಮೌನದಿಂದ ಇಂದ ಮನಸ್ಸು ನಲ್ಲಿ ಭಗವಂತನ ಚಿಂತನೆ ಮಾಡುತ್ತಾ – ಕೇಂದ್ರದ ಭಗವಂತನ ಮೂರ್ತಿ ಅಥವಾ ಯಜ್ಞ ಕುಂಡ /ಆವಾಹನೆ ಮಾಡಿದ ಭಗವದ್ ಶಕ್ತಿ ಯನ್ನು ಸ್ಮರಿಸುತ್ತ್ತ, ಬೇರೆ ಏನು ಮನ ಪಟಲದಲ್ಲಿ ಕಾಣದೆ ಅಥವಾ ಬಾಹ್ಯ ವಸ್ತುವಿನಿಂದ ವಿಚಲಿತ ರಾಗದೆ ಪೂರ್ಣ ಕೇಂದ್ರದ ಶಕ್ತಿ ಮೇಲೆ ತನ್ಮಯ ನಾಗವುದು .ಹೆಜ್ಜೆ ಸಹ ನಿಧಾನಗತಿ ಇರಬೇಕು .ಹೆಜ್ಜೆ ನಮಸ್ಕಾರ ಅನ್ನುವುದು ಈಗ ಪ್ರಚಲಿತ .ಮೂಲದಲ್ಲಿ ಹಾಗೆ ಇಡಬೇಕು ಅಂತ ಇದ್ದಿದ್ದು .

ಪ್ರದಕ್ಷಿಣೆ ಮಾಡುತ್ತಾ ಹೇಳಿ ಕೊಳ್ಳುವುದು

ಯಾನಿ ಕಾನಿ ಚ ಪಾಪಾನಿi ಜನ್ಮಾಂತರ ಕೃತಾನಿ ಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಾ ಪದೇ ಪದೇ

ಅಂದರೆ ಜನ್ಮಾಂತರದಲ್ಲಿ ಮಾಡಿದ ಪಾಪಗಳು , ಹಾಗಾಗೇ ನಾಶವಾಗಲಿ ಪ್ರತಿ ಪ್ರದಕ್ಷಿಣೆಯಲ್ಲಿ ಅನ್ನುವ ಅರ್ಥ.

ಸ್ಕಂದ ಪುರಾಣದಲ್ಲಿ ಹೇಳಿದಂತೆ – ಮೊದಲನೇ ಪ್ರದಕ್ಷಿಣೆ ಹೆಜ್ಜೆ ಮನದ ಪಾಪವನ್ನು ಎರಡನೇ ಹೆಜ್ಜೆ ಮಾತಿನಿಂದ ಆದ ಪಾಪವನ್ನು ,ಮೂರನೇ ಹೆಜ್ಜೆ ದೇಹದಿಂದ ಆದ ಪಾಪವನ್ನು ನಾಶ ಮಾಡುವುದು ಅಂತ ನಂಬಿಕೆ .

ಇನ್ನುಈಗೀಗ ಪ್ರತೀತಿ -ಗಂಡು ದೇವರಿಗೆ ಸಮ ಸಂಖ್ಯೆ 2 ,4 ,6 ಹೀಗೆ ಈ ರೀತಿ ಸಂಖ್ಯೆ ಪ್ರದಕ್ಷಿಣೆ
ಹೆಣ್ಣು ದೇವರಿಗೆ 1 ,3 ,5 ಹೀಗೆ ಪ್ರದಕ್ಷಿಣೆ ಸಂಖ್ಯೆ
ಶಿವನಿಗೆ ಗಂಗೆ ಹರಿಯುವ ಗೋಮುಖ ದಾಟಬಾರದು ಅಂತ .ಹಾಗಾಗಿ ಮುಕ್ಕಾಲು ಪ್ರದಕ್ಷಿಣೆ !!! ವಾಪಾಸ್ ಬರಬೇಕಾ ಹಾಗಿದ್ರೆ ? ಬಂದರೆ ಮತ್ತೆ ಅದು ಅಪಸವ್ಯ .ಇಂತ ಪ್ರದಕ್ಷಿಣೆ ಸಂಖ್ಯೆ ಈಗೀಗ ಪ್ರಚಲಿತ ಹಿಂದೆ ಕಂಡಿಲ್ಲ

ಕನಿಷ್ಠ ಪ್ರದಕ್ಷಿಣೆ ಈ ರೀತಿ ಇದೆ .
ಗಣೇಶನಿಗೆ ೧
ನವಗ್ರಹ ೨
ಶಿವನಿಗೆ ೩
ದೇವಿ ,ವಿಷ್ಣು ೪
ಶಾಸ್ತ -೫
ಕಾರ್ತಿಕೇಯ ೬
ಅಶ್ವಥ ಮರ ೭
ನಾಗನ ಕಲ್ಲು ೮
ಇದು ಸಹ ಈಗೀಗ ಪ್ರಚಲಿತ ಬಂದಿರೋದು .

ಇನ್ನು ಪ್ರದಕ್ಷಿಣೆ ವಿಧಗಳು
ಆತ್ಮ ಪ್ರದಕ್ಷಿಣೆ – ನಮ್ಮ ಸುತ್ತ ನಾವು ಮಾಡಿಕೊಂಡು ದೇವರಿಗೆ ಅರ್ಪಣೆ

ಗಿರಿ ಪ್ರದಕ್ಷಿಣೆ – ಬೆಟ್ಟದ ಸುತ್ತ ಪ್ರದಕ್ಸಿಣೆ ಬರುವುದು – ಹುಣ್ಣಿಮೆ ದಿನ ಅರುಣಾಚಲ ಬೆಟ್ಟ ಪ್ರದಕ್ಷಿಣೆ ಬರುವುದು ಹೆಚ್ಚು ಪ್ರಚಲಿತ .

ಆದಿ ಪ್ರದಕ್ಷಿಣೆ ಅಥವಾ ಹೆಜ್ಜೆ ನಮಸ್ಕಾರ -ಪಾದದ ಹಿಮ್ಮಡಿಗೆ ಇನ್ನೊಂದು ಪಾದದ ಹೆಬ್ಬೆರಳು ತಾಗಿಸುಕೊಂಡು ಪ್ರದಕ್ಷಿಣೆ ಬರುವ ಕ್ರಮ – ಮಂತ್ರಾಲಯ ಮತ್ತು ಹಲವಾರು ಕ್ಷೇತ್ರಗಳಲ್ಲಿ ಪ್ರಚಲಿತ .

ಅಂಗ ಪ್ರದಕ್ಷಿಣೆ -ಒದ್ದೆ ಬಟ್ಟೆಯಲ್ಲಿ ಉರುಳು ಸೇವೆ ಮಾಡುವುದು .

ಮತ್ತೊಂದು ಬಹಳ ಕಠಿಣ ಮಂಡಿಮೇಲೆ ಹೆಜ್ಜೆ ಇಡುತ್ತ ಪ್ರದಕ್ಷಿಣೆ ಬರುವ ಕ್ರಮ

~~ಸಂಗ್ರಹ ~~