ಸ್ವಸ್ತಿಕ್ ಚಿಹ್ನೆ

ಸ್ವಸ್ತಿಕ್ ಚಿಹ್ನೆಯ ಬಳಸಿ ಈ ಕೆಲಸ ಮಾಡುವುದರಿಂದ ನಿಮ್ಮ ದರಿದ್ರ ನಿವಾರಣೆ ಆಗಿ ಸುಖ ಜೀವನ ದೊರೆಯುತ್ತದೆ

ನಮಸ್ಕಾರ ಸ್ನೇಹಿತರೆ ಸಹಜವಾಗಿ ಹೊಸ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಅಥವಾ ದೇವಾಲಯಗಳಲ್ಲಿ ಯಾವುದಾದರೂ ಹೊಸದಾದ ಕೆಲಸ ಕಾರ್ಯಗಳನ್ನು ಆರಂಭ ಮಾಡಬೇಕಾದರೆ ಪ್ರತಿನಿತ್ಯದ ಪೂಜೆಯಲ್ಲಿ ಕಳಸ ಸ್ಥಾಪನೆಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಮುಖ್ಯವಾಗಿ ಬರೆಯುತ್ತೇವೆ, ನಂತರ ಉಳಿದ ಕೆಲಸವನ್ನು ಆರಂಬಿಸುತ್ತೇವೆ, ಆದರೆ ಇದರ ಅರ್ಥವೇನು, ಹೀಗೆ ಬರೆಯುವುದರಿಂದ ಸಿಗುವ ಪ್ರಯೋಜನಗಳು ಏನು ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಹಾಗಾದರೆ ಸ್ವಸ್ತಿಕ್ ಚಿಹ್ನೆಯ ಅರ್ಥವೇನು, ಇದನ್ನು ಯಾಕೆ ಮತ್ತು ಯಾವ ಸಂದರ್ಭದಲ್ಲಿ ಬರೆಯಬೇಕು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ.ಸ್ವಸ್ತಿಕ್ ಎಂದರೆ ಒಳ್ಳೆಯದನ್ನು ಮಾಡುವವನು ಎಂದು ಅರ್ಥ, ಸ್ವಸ್ತಿಕವನ್ನು ಗಣೇಶನ ಸಂಕೇತವೆಂದು ಪರಿಗಣಿಸಲಾಗಿದೆ, ಹಾಗಾಗಿ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮೊದಲು ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸುವುದು ಇದೇ ಕಾರಣಕ್ಕಾಗಿ, ಇದು ಗಣೇಶನನ್ನು ಪ್ರತಿನಿಧಿಸುವುದರಿಂದ, ನಾವು ಮಾಡುವ ಕೆಲಸ ಕಾರ್ಯಗಳಿಗೆ ಯಾವುದೇ ಅಡೆತಡೆಗಳು ಬರಬಾರದು ಎಂಬ ಉದ್ದೇಶಕ್ಕಾಗಿ ಇದನ್ನು ಬರೆಯುವುದು. ಇನ್ನು ಸ್ವಸ್ತಿಕ್​​ ಚಿಹ್ನೆಯು ನಾಲ್ಕು ರೇಖೆಗಳನ್ನು ಹೊಂದಿದ್ದು ಅದು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣವನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಈ ರೇಖೆಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ.

ಇನ್ನು ಮನೇಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ, ವ್ಯಾಪಾರ ವ್ಯವಹಾರ ಮಾಡುವ ಸ್ಥಳಗಳಲ್ಲಿ ಈ ಒಂದು ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ವ್ಯಾಪಾರದಲ್ಲಿರುವ ಸಮಸ್ಯೆಗಳು ನಿವಾರಣೆಯಾಗಿ ಅಭಿವೃದ್ಧಿಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಮೊದಲು ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ನಾಲ್ಕು ದಿಕ್ಕುಗಳಲ್ಲೂ ಕೂಡ ಯಾವುದಾದರೂ ದೋಷಗಳು ಆಗಿದ್ದರೆ ಆ ದೋಷಗಳನ್ನು ನಿವಾರಣೆ ಮಾಡುತ್ತದೆ ಎಂಬ ನಂಬಿಕೆ ನಮ್ಮ ವಾಸ್ತು ಶಾಸ್ತ್ರದಲ್ಲಿ ಇದೆ. ಈ ಎಲ್ಲಾ ಕಾರಣಕ್ಕಾಗಿಯೇ ಪ್ರಥಮ ಪೂಜಿತನಾದ ಗಣೇಶನನ್ನು ಪ್ರತಿನಿಧಿಸುವ ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡಲು ಸ್ವಸ್ತಿಕ್ ಚಿಹ್ನೆಯನ್ನು ಬಳಸಲಾಗುತ್ತದೆ. ಇನ್ನು ಪೂಜೆಯ ಸಂದರ್ಭದಲ್ಲಿ ನಾವು ಕಳಸಕ್ಕೆ ಆಗಲಿ ಅಥವಾ ಕಳಶವನ್ನು ಇಡುವಂತಹ ಸ್ಥಳದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ಪೂಜಾ ಕಾರ್ಯಗಳಿಗೆ ಯಾವುದೇ ರೀತಿಯ ಅಡೆತಡೆಗಳು ಇರುವುದಿಲ್ಲ ಒಂದು ವೇಳೆ ಪೂಜೆಯಲ್ಲಿ ಏನಾದರೂ ತಪ್ಪಾಗಿದ್ದರು ಕೂಡಾ ಅದು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ವ್ಯಾಪಾರದಲ್ಲಿ ನಷ್ಟವಿದ್ದರೆ ಅದನ್ನು ತಡೆಯಲು ಸತತ 7 ಗುರುವಾರ ಅಂಗಡಿಯ ಈಶಾನ್ಯ ಮೂಲೆಯಲ್ಲಿ ಒಣಗಿದ ಹಳದಿ ಬಣ್ಣದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು, ಹೀಗೆ ಮಾಡುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಗಳು ಕಂಡುಬರುತ್ತವೆ.
(ಸಂಗ್ರಹ)