ಬೆಳ್ಳುಳ್ಳಿ ತಿಂದರೆ ಎನಾಗುತ್ತೆ ?

ಬೆಳ್ಳುಳ್ಳು ಆ್ಯಂಟಿಆಕ್ಸಿಡೆಂಟ್ ಅಧಿಕವಿರುವ ಒಂದು ಅದ್ಭುತವಾದ ತರಕಾರಿಯಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಗುಣಗಳಿವೆ, ಅದರಲ್ಲೂ ಚಳಿಗಾಲದಲ್ಲಿ ತಿನ್ನುವುದರಿಂದ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಇವುಗಳನ್ನು ಸಮರ್ಥವಾಗಿ ಎದುರಿಸಬಹುದು. ಅದರಲ್ಲೂ ರೋಸ್ಟ್ ಮಾಡಿದ (ಹುರಿದ) ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಗ್ಯಾಸ್‌ ತುಂಬಿ ಹೊಟ್ಟೆ ಉಬ್ಬಿದಂತೆ ಭಾಸವಾದರೆ ಬೆಳ್ಳುಳ್ಳಿಯನ್ನು ರೋಸ್ಟ್ ಅಥವಾ ಸುಟ್ಟು ತಿಂದರೆ ಸಾಕು.

ರೋಸ್ಟಡ್‌ ಬೆಳ್ಳುಳ್ಳಿ ತಿನ್ನುವುದರಿಂದ ದೊರೆಯುವ ಪ್ರಯೋಜನ :

ಬೆಳ್ಳುಳ್ಳಿ ತಿನ್ನುವುದರಿಂದ ದೊರೆಯುವ ಪ್ರಯೋಜನಗಳು ಮೈ ಬೊಜ್ಜು ಕರಗುವುದು ಚಳಿಗಾಲದಲ್ಲಿ ಹುರಿದ (ತವಾದಲ್ಲಿ ಹಾಕಿ ಎಣ್ಣೆ ಹಾಕದೆ ಹುರಿದ)ಅಥವಾ ಸುಟ್ಟ ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕಡಿಮೆಯಾಗುವುದು. ಕೊಲೆಸ್ಟ್ರಾಲ್ ಕಡಿಮೆಯಾದರೆ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಬೆಳ್ಳುಳ್ಳಿ ಬೊಜ್ಜು ಕರಗಿಸುವುದರಿಂದ ತೆಳ್ಳಗಾಗುವಿರಿ.

ದಿನಾ 2 ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಶೀತ-ಕೆಮ್ಮು ದೂರ ಮಾಡುವುದು ಚಳಿಗಾಲದಲ್ಲಿ ಶೀತ-ಕೆಮ್ಮು ಈ ರೀತಿಯ ಸಮಸ್ಯೆ ಸರ್ವೇ ಸಾಮಾನ್ಯ. ದಿನಾ ಬೆಳ್ಳುಳ್ಳಿ ತಿನ್ನುವುದರಿಂದ ಈ ರೀತಿಯ ಸಮಸ್ಯೆ ಕಾಡಲ್ಲ, ಒಂದು ವೇಳೆ ಕೆಮ್ಮು-ಶೀತ ಇದ್ದರೆ ಬೆಳ್ಳುಳ್ಳಿ ಸುಟ್ಟು ಜಜ್ಜಿ ಅದರ ರಸ ತೆಗೆದು ಜೇನಿನ ಜೊತೆ ಮಿಶ್ರ ಮಾಡಿ ಬೆಳಗ್ಗೆ ಹಾಗೂ ಮಲಗುವ ಮುನ್ನ ಸೇವಿಸಿದರೆ ಬೇಗನೆ ಕಡಿಮೆಯಾಗುವುದು.

ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು ರೋಸ್ಟ್ ಮಾಡಿದ ಬೆಳ್ಳುಳ್ಳಿಯನ್ನು ದಿನಾ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು, ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತೆ. ಅಲ್ಲದೆ ಇದು ಬಿಪಿ ನಿಯಂತ್ರಿಸಲೂ ಸಹಕಾರಿ.

ಹೃದಯ ಕಾಯಿಲೆಯ ಅಪಾಯ ತಪ್ಪಿಸುತ್ತೆ ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ರೋಸ್ಟ್ ಮಾಡಿದ ಬೆಳ್ಳುಳ್ಳಿಯನ್ನು ಜೇನು ಜೊತೆ ಮಿಶ್ರ ಮಾಡಿ ಸೇವಿಸಿದರೆ ಹೃದಯದ ಕಾಯಿಲೆಯ ಅಪಾಯವನ್ನು ತಪ್ಪಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ ಹೊಟ್ಟೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸಲು ಬೆಳ್ಳುಳ್ಳಿ ಸಹಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದು, ಇದು ಗ್ಯಾಸ್ಟ್ರಿಕ್ ಸಮಸ್ಯೆ , ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತೆ.

~~ ಸಂಗ್ರಹ ~~